ವರದಿ: ವಿಕಿಲ ಎಸ್. ಹಿರೇಮಠ
ಉಗಾರ ಖುರ್ದ : ಪಟ್ಟಣದಲ್ಲಿ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಹಿಂದೂ – ಮುಸ್ಲಿಂ ಸಮುದಾಯದ ಭಾಂಧವರು ಗಣೇಶ ಹಬ್ಬವನ್ನು ಭಾವೈಕ್ಯತೆಯಿಂದ ಆಚರಿಸಿದರು.

ಶ್ರೀ ಏಕದಂತ ಬಾಲ ಗಣೇಶ ಮಂಡಳದ ಗಣಪತಿಗೆ ಮುಸ್ಲಿಂ ಸಮುದಾಯ ಜಮಾದಾರ ಹಾಗೂ ಡಾಂಗೆ ಬಂಧುಗಳಿಂದ ಗಣೇಶ ಮೂರ್ತಿಗೆ ವಿಶೇಷ ಪೂಜೆ ಮಾಡಿದರು. ಇನ್ನು ಏಕದಂತ ಮಂಡಳದ ಸದಸ್ಯರು ಗಾಂಧಿಚೌಕ ದರ್ಗಾದಲ್ಲಿರುವ ಮಾಬು ಉಸ್ತಾನಿ ದೇವರಿಗೆ ಗಲೀಫ್ ಹಾಕುವ ಮೂಲಕ ಭಕ್ತಿ ಪರಾಕಷ್ಟೆ ತೋರುವ ಮೂಲಕ ಹಿಂದೂ – ಮುಸ್ಲಿಂ ಭಾಂದವರು ಸಮಾಜಕ್ಕೆ ಒಗ್ಗಟ್ಟಿನ ಸಂದೇಶ ರವಾನಿಸಿದರು.

ಈ ಸಮಯದಲ್ಲಿ ಪಿಎಸ್ಐ ರಾಘವೇಂದ್ರ ಖೋತ,ಅನಂತ ಒಡೆಯರ್,ಪ್ರಕಾಶ ಶಿಂದೆ,ವಿಶಾಲ ಭೋಸಲೆ,ಅಮೋಲ ಒಡೆಯರ್,ರೂಪೇಶ್ ದೇಶಮುಖ,ಸಂದೀಪ ದೇಸಾಯಿ,ಆಸೀಫ್ ಡಾಂಗೆ,ಆಕ್ರಮ ಜಮಾದಾರ,ಮಲಿಕ್ ಜಮಾದಾರ,ಅಲ್ಲಾಭಕ್ಷ ಡಾಂಗೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

