ಕಾಗವಾಡ: ಕಾಗವಾಡ ಪೊಲೀಸ್ ಠಾಣೆಯ ಪಿಎಸ್ಐ ರಾಘವೇಂದ್ರ ಖೋತ ಹಾಗೂ ಅಪರಾಧ ವಿಭಾಗದ ಪೊಲೀಸ್ ಕಾನಸ್ಟೇಬಲ ಆಗಿ ಕಾರ್ಯನಿರ್ವಹಿಸುತ್ತಿರುವ ಮುರಗೇಶ ಜಂಬಗಿ ಅವರಿಗೆ ಉತ್ತರ ವಲಯದ ಐಜಿಪಿ ಸಂದೀಪ ಪಾಟೀಲ ಅವರು ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.

2025-26 ರಲ್ಲಿ 10 ಸ್ವತ್ತಿನ ದಾಖಲಾಗಿದ್ದ ಕಳ್ಳತನ ಪ್ರಕರಣದಲ್ಲಿ ಪಿಎಸ್ಐ ರಾಘವೇಂದ್ರ ಖೋತ ಹಾಗೂ ಸಿಬ್ಬಂದಿ ವರ್ಗದವರು ಎಚ್ಚೆತ್ತುಕೊಂಡು ಕಳ್ಳರ ಹೆಡಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದರು.


ಪ್ರಕರಣದಲ್ಲಿ ಆರೋಪಿಗಳ ಪತ್ತೆ ಮಾಡಿ 58 ,13,850 ರೂ ಬೆಳ್ಳಿ ಹಾಗೂ ಬಂಗಾರ ಆಭರಣ ಜೊತೆಗೆ ದ್ವಿಚಕ್ರ ವಾಹನ, 7 ಲಕ್ಷ ರೂ ಎರ್ಟಿಗಾ ಕಾರು,2.81,250ರೂ ಹಣವನ್ನು ವಶಪಡಿಸಿ ಪತ್ತೆ ಮಾಡುವಲ್ಲಿ ತಮ್ಮ ಕಾರ್ಯವೈಖರಿ ಶ್ಲಾಘನೀಯವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

