ಬೆಂಗಳೂರು:ನಗರದ ಹೃದಯಭಾಗದಲ್ಲಿರುವ 66/11 ಕೆ.ವಿ ‘ಸಿ’ ಮತ್ತು ‘ಎ’ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಅತ್ಯಗತ್ಯ ತುರ್ತು ನಿರ್ವಹಣಾ ಕಾಮಗಾರಿಗಳು ನಡೆಯಲಿರುವ ಹಿನ್ನೆಲೆಯಲ್ಲಿ ಜುಲೈ 26ರ ಭಾನುವಾರ (26.07.2026) ಬೆಂಗಳೂರಿನ ಪ್ರಮುಖ ವಿವಿಐಪಿ ವಲಯಗಳು, ವಾಣಿಜ್ಯ ಪ್ರದೇಶಗಳು ಮತ್ತು ಜನನಿಬಿಡ ವಸತಿ ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ತಾತ್ಕಾಲಿಕವಾಗಿ ಕಡಿತಗೊಳ್ಳಲಿದೆ ಎಂದು ಬೆಸ್ಕಾಂ (BESCOM) ಪ್ರಕಟಿಸಿದೆ.
ವಿದ್ಯುತ್ ವ್ಯತ್ಯಯದ ಪ್ರತ್ಯೇಕ ಸಮಯಗಳು:
66/11ಕೆ.ವಿ ‘ಸಿ’ ಸ್ಟೇಷನ್ ವ್ಯಾಪ್ತಿ: ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 06:00 ಗಂಟೆಯವರೆಗೆ (8 ಗಂಟೆಗಳ ಕಾಲ).
66/11ಕೆ.ವಿ ‘ಎ’ ಸ್ಟೇಷನ್ ವ್ಯಾಪ್ತಿ: ಬೆಳಿಗ್ಗೆ 10:00 ಗಂಟೆಯಿಂದ ಸಾಯಂಕಾಲ 05:00 ಗಂಟೆಯವರೆಗೆ (7 ಗಂಟೆಗಳ ಕಾಲ).
ಪ್ರಮುಖ ಸರ್ಕಾರಿ, ವಿವಿಐಪಿ ಮತ್ತು ಸಾರ್ವಜನಿಕ ಕಚೇರಿಗಳ ವಲಯ:
ವಿಧಾನಸೌಧ, ವಿಕಾಸಸೌಧ, ರಾಜಭವನ ಪ್ರದೇಶ, ಲೋಕ ಭವನ, ಕಾವೇರಿ ಭವನ, ಮುಖ್ಯ ನ್ಯಾಯಮೂರ್ತಿಗಳ ನಿವಾಸ, ಪೊಲೀಸ್ ಆಯುಕ್ತರ ಕಚೇರಿ, ಕೆಪಿಎಸ್‌ಸಿ (KPSC), ಸಿಒಡಿ (COD) ಆಫೀಸ್, ವಿಶ್ವೇಶ್ವರಯ್ಯ ಟವರ್, ಕೆಎಸ್‌ಎಫ್‌ಸಿ (KSFC) ಕಟ್ಟಡ, ಯುಎನ್‌ಐ (UNI) ಏರಿಯಾ, ಬಿಎಸ್‌ಎನ್‌ಎಲ್ ಎಂಎಸ್ ಕಟ್ಟಡ, ಆರ್‌ಬಿಐ (RBI) ಕ್ವಾರ್ಟರ್ಸ್, ಕಂಠೀರವ ಕ್ರೀಡಾಂಗಣ ಪ್ರದೇಶ ಮತ್ತು ಕಾಂಗ್ರೆಸ್ ಕಚೇರಿ ಸುತ್ತಮುತ್ತಲ ಆವರಣಗಳು.
ಪವರ್ ಕಟ್ ಆಗಲಿರುವ ಪ್ರಮುಖ ವಾಣಿಜ್ಯ ಮತ್ತು ಸಾರ್ವಜನಿಕ ಸ್ಥಳಗಳು:
ಮೆಜೆಸ್ಟಿಕ್ ಬಸ್ ನಿಲ್ದಾಣ ಪ್ರದೇಶ, ಸಿಟಿ ಮಾರ್ಕೆಟ್ (ಕೆ.ಆರ್. ಮಾರ್ಕೆಟ್), ಮಂತ್ರಿ ಸ್ಕ್ವೇರ್ ಮಾಲ್, ಮಂತ್ರಿ ಗ್ರೀನ್ಸ್ ಅಪಾರ್ಟ್ಮೆಂಟ್ಸ್, ಅಪೋಲೋ ಆಸ್ಪತ್ರೆ ಆವರಣ, ಬೌರಿಂಗ್ ಆಸ್ಪತ್ರೆ ಪ್ರದೇಶ, ರೈಲ್ವೆ ಕ್ವಾರ್ಟರ್ಸ್, ಉಪ್ಪಾರಪೇಟೆ ಪೊಲೀಸ್ ಠಾಣೆ ಸುತ್ತಮುತ್ತ ಮತ್ತು ಪ್ಯಾಲೆಸ್ ಗ್ರೌಂಡ್ಸ್ ಆವರಣ.
ವಿದ್ಯುತ್ ವ್ಯತ್ಯಯವಾಗಲಿರುವ ರಸ್ತೆ ಮತ್ತು ಬಡಾವಣೆಗಳ ಸಂಪೂರ್ಣ ಪಟ್ಟಿ:
ಕೇಂದ್ರ ವಲಯದ ರಸ್ತೆಗಳು: ಕನಿಂಗ್ಹ್ಯಾಮ್ ರಸ್ತೆ ಮತ್ತು ಕ್ರಾಸ್, ಇನ್ಫ್ಯಾಂಟ್ರಿ ರಸ್ತೆ, ಕ್ವೀನ್ಸ್ ರಸ್ತೆ, ಮಿಲ್ಲರ್ಸ್ ರಸ್ತೆ, ಬ್ರಾಡ್ವೇ ರಸ್ತೆ, ಕಾಕ್ಬರ್ನ್ ರಸ್ತೆ, ಸ್ಟೇಷನ್ ರಸ್ತೆ, ತಿಮ್ಮಯ್ಯ ರಸ್ತೆ, ಅಲಿ ಆಸ್ಕರ್ ರಸ್ತೆ ಮತ್ತು ಕ್ರಾಸ್, ಮಿಲ್ಲರ್ ಟ್ಯಾಂಕ್ ಬಂಡ್ ರಸ್ತೆ, ಜಾಸ್ಮಾ ಭವನ ರಸ್ತೆ, ಸುಲ್ತಾನ್ಜಿ ಗುಂಟಾ ರಸ್ತೆ, ಹೇನ್ಸ್ ರಸ್ತೆ, ಕಾನಾಟ್ ರಸ್ತೆ, ಎಡ್ವರ್ಡ್ ರಸ್ತೆ, ಇಂಡಿಯನ್ ಎಕ್ಸ್‌ಪ್ರೆಸ್ ಪ್ರದೇಶ ಮತ್ತು ಕೆನ್ಸಿಂಗ್ಟನ್ ರಸ್ತೆ.
ಪ್ರಮುಖ ಮಾರುಕಟ್ಟೆ ರಸ್ತೆಗಳು: ಅವೆನ್ಯೂ ರಸ್ತೆ, ಬಿ.ವಿ.ಕೆ. ಅಯ್ಯಂಗಾರ್ ರಸ್ತೆ, ಆರ್.ಟಿ. ಸ್ಟ್ರೀಟ್, ಚಿಕ್ಕಪೇಟೆ, ಕಬ್ಬನ್ಪೇಟೆ, ಕಾಟನ್ಪೇಟೆ, ಸ್ಲಾಟರ್ಹೌಸ್ ರಸ್ತೆ, ಬಾಂಬೂ ಬಜಾರ್, ಚಿಕ್ ಬಜಾರ್ ರಸ್ತೆ, ಚಾಂದನಿ ಚೌಕ್, ಈವಿನಿಂಗ್ ಬಜಾರ್, ನ್ಯೂ ಮಾರ್ಕೆಟ್ ರಸ್ತೆ, ಓಪಿಎಚ್ ರಸ್ತೆ, ಜೈನ್ ಟೆಂಪಲ್ ರಸ್ತೆ ಮತ್ತು ಕೆ.ಆರ್. ಸರ್ಕಲ್ ಸುತ್ತಮುತ್ತಲಿನ ಪ್ರದೇಶಗಳು.
ಪ್ರಮುಖ ವಸತಿ ಬಡಾವಣೆಗಳು: ವಸಂತನಗರ (ಸಂಪೂರ್ಣ), ಮಲ್ಲೇಶ್ವರಂ, ಶೇಷಾದ್ರಿಪುರಂ, ಗಾಂಧಿನಗರ, ಒಕಲಿಪುರಂ, ಪ್ರಕಾಶ್ ನಗರ, ಕುಮಾರ ಪಾರ್ಕ್ ಪಶ್ಚಿಮ, ಕ್ಲೀವ್ಲ್ಯಾಂಡ್ ಟೌನ್, ಮಾಧವ ನಗರ, ಕ್ರೆಸೆಂಟ್ ರಸ್ತೆ, ನಂದಿದುರ್ಗ ರಸ್ತೆ, ಬೆನ್ಸನ್ ಕ್ರಾಸ್, ಚಿನಪ್ಪ ಗಾರ್ಡನ್, ಪ್ರೊಮನೇಡ್ ರಸ್ತೆ, ಕೆಂಪ್ ರಸ್ತೆ, ನೇತಾಜಿ ರಸ್ತೆ, ಕೋಲ್ಸ್ ರಸ್ತೆ, ವೀಲರ್ಸ್ ರಸ್ತೆ ಮತ್ತು ರಾಬರ್ಟ್ಸನ್ ರಸ್ತೆ.
ಇತರ ಒಳಗಿನ ಬೀದಿಗಳು: ಪಯ್ಯಪ್ಪ ಗಾರ್ಡನ್, ಸಮಾಧಿ ರಸ್ತೆ, ಪಾರ್ಕ್ ರಸ್ತೆ, ನಾಲಾ ರಸ್ತೆ, ನೋಹಾ ಸ್ಟ್ರೀಟ್, ಇ ಸ್ಟ್ರೀಟ್, ಡಿ ಸ್ಟ್ರೀಟ್, ಧನಕೋಟಿ ಲೇನ್, ನೆಹರುಪುರಂ, ಮುತ್ತ್ಯಾಲಮ್ಮ ಕೊಯಿಲ್ ಸ್ಟ್ರೀಟ್, ಮ್ಯಾಕನ್ ಕಂಪೌಂಡ್ ರಸ್ತೆ, ಎನ್.ಪಿ. ಸ್ಟ್ರೀಟ್, ಸೆಪ್ಪಿಂಗ್ಸ್ ರಸ್ತೆ, ಬ್ರಾಡ್ಶಾ ಸ್ಟ್ರೀಟ್, ಪ್ಯಾಲೆಸ್ ಟಾಕೀಸ್ ಪ್ರದೇಶ, ಎಂ.ಡಿ. ಬ್ಲಾಕ್, ಬನ್ನಪ್ಪ ಪಾರ್ಕ್, ತುಳಸಿ ತೋಟ, ಹೊಯ್ಸಳ ಅಪಾರ್ಟ್ಮೆಂಟ್, ಕಲ್ಲಹಳ್ಳಿ ಬಿಡಿಎ ಕ್ವಾರ್ಟರ್ಸ್ ಮತ್ತು ಎಂಇಜಿ ಸೆಂಟರ್.
ಭಾನುವಾರ ಗೃಹಬಳಕೆದಾರರು ಹಾಗೂ ವಾಣಿಜ್ಯ ವಹಿವಾಟು ನಡೆಸುವ ವರ್ತಕರು ಮುನ್ನೆಚ್ಚರಿಕೆ ವಹಿಸಿ ಬೆಸ್ಕಾಂ ಅಧಿಕಾರಿಗಳೊಂದಿಗೆ ಸಹಕರಿಸಬೇಕಾಗಿ ಕೋರಲಾಗಿದೆ.

