ಬೆಂಗಳೂರು,ಜೂ.28: ಅಭಿಮಾನಿಗಳು ಯಾರೊಬ್ಬರೂ ಜೈಲಿನ ಬಳಿ ಬರಬಾರದು ಎಂದು ನಟ ದರ್ಶನ್ ಮನವಿ ಮಾಡಿದ್ದಾರೆ.
ಜೈಲಿನಿಂದಲೇ ಜೈಲಾಧಿಕಾರಿಗಳ ಮೂಲಕ ಅಭಿಮಾನಿಗಳಿಗೆ ಸಂದೇಶ ರವಾನಿಸಿರುವ ದರ್ಶನ್,ಅಭಿಮಾನಿಗಳು ಯಾರೂ ಜೈಲಿನ ಬಳಿ ಬರಬೇಡಿ. ಜೈಲಿನ ನಿಯಮಗಳ ಪ್ರಕಾರ ನಿಮ್ಮ ಭೇಟಿ ಅಸಾಧ್ಯ,ಆದ್ದರಿಂದ ಯಾರೂ ನನ್ನ ನೋಡಲು ಜೈಲಿನ ಬಳಿ ಬರಬೇಡಿ ಎಂದು ಕೋರಿದ್ದಾರೆ.
ಜೈಲಿನ ಬಳಿ ನನ್ನ ಭೇಟಿಗೆ ಬಂದು ಅವಕಾಶ ಸಿಗದೆ ನಿರಾಸೆಯಿಂದ ವಾಪಸ್ ಹೋಗುವುದು ಸರಿಯಲ್ಲ, ಅದರಲ್ಲೂ ನಿನ್ನೆ ವಿಶೇಷಚೇತನ ಯುವತಿ ಸೌಮ್ಯಾ ಭೇಟಿಗೆ ಆಗಮಿಸಿದ್ದ ಬಗ್ಗೆ ಬೇಜಾರಾಯಿತು ಎಂದು ಹೇಳಿದ್ದಾರೆ.