Wed. Jul 22nd, 2026

ಕರ್ತವ್ಯ ಲೋಪ;ಸಿಸಿಬಿ ಹೆಡ್ ಕಾನ್ಸ್ ಟೇಬಲ್ ಅಮಾನತು

Share this with Friends


ಮೈಸೂರು, ಜು.18: ಕರ್ತವ್ಯ ಲೋಪ ಮಾಡಿದ ಹಿನ್ನಲೆಯಲ್ಲಿ ಮೈಸೂರು ಸಿಸಿಬಿ ಘಟಕದ ಹೆಡ್ ಕಾನ್ಸ್ಟೇಬಲ್ ಒಬ್ಬರನ್ನು ಅಮಾನತುಪಡಿಸಲಾಗಿದೆ.

ಮುಖ್ಯಪೇದೆ ಸಲೀಂ ಅಮಾನತುಗೊಂಡಿದ್ದಾರೆ.

ಸಂಚಾರ ಮತ್ತು ಅಪರಾಧ ಡಿಸಿಪಿ ಜಾಹ್ನವಿ ಅವರು ಸಲೀಂ ಅವರನ್ನು ಅಮಾನತು‌ ಪಡಿಸಿ ಆದೇಶ ಹೊರಡಿಸಿದ್ದಾರೆ.

ಕಳ್ಳತನ ಆರೋಪಿಗಳ ಜೊತೆ ಸಂಪರ್ಕ ಹೊಂದಿರುವುದು ಹಾಗೂ ಇನ್ನಿತರ ಆರೋಪಗಳು ಮೇಲ್ನೋಟಕ್ಕೆ ಸಾಬೀತಾದ ಕಾರಣ ಸಲೀಂ ಅಮಾನತುಗೊಂಡಿದ್ದಾರೆ.


Share this with Friends

Related Post