Wed. Jul 22nd, 2026

ಸಾಲಗಾರರಿಗೆ ಹೆದರಿ ಡೆತ್ ನೋಟ್ ಬರೆದು ನಾಪತ್ತೆಯಾಗಿದ್ದ ಆಟೋ ಡ್ರೈವರ್ ಶವ ಪತ್ತೆ

Share this with Friends

ಮೈಸೂರು,ಜು.28: ಸಾಲಗಾರರ ಕಿರುಕುಳಕ್ಕೆ ಹೆದರಿ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಆಟೋಡ್ರೈವರ್ ಶವ ಪತ್ತೆಯಾಗಿದ್ದು,ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.

ಹುಣಸೂರು ತಾಲೂಕಿನ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟುವಾಡಿ ಗ್ರಾಮದಿಂದ ಜುಲೈ 20 ರಂದು ಕಾಣೆಯಾಗಿದ್ದ ಪ್ರಸಾದ್ ಅವರ‌ ದೇಹ ಹೆಚ್.ಡಿ.ಕೋಟೆಯ ಸರಗೂರಿನ ಕಪಿಲಾ ನದಿ ದಂಡೆ ಸೋಮೇಶ್ವರ ದೇವಸ್ಥಾನದ ಬಳಿ ನೀರಿನಲ್ಲಿ ಪತ್ತೆಯಾಗಿದೆ.

ನನ್ನ ಸಾವಿಗೆ ಫೈನಾನ್ಸ್ ಮಧು ಹಾಗೂ ಟೆಂಪೋ ಕಿರಣ ಕಾರಣ ಎಂದು ಡೆತ್ ನೋಟ್ ಬರೆದು ಆಟೋದಲ್ಲಿ ಇಟ್ಟು ಪ್ರಸಾದ್ ನಾಪತ್ತೆಯಾಗಿದ್ದರು.

ಫೈನಾನ್ಸ್ ಮಧು ಬಳಿ ಕಿರಣ್ ಜಾಮೀನು ನೀಡಿ ಹಣ ಸಾಲ ಕೊಡಿಸಿದ್ದ.ನಿಗದಿತ ಸಮಯಕ್ಕೆ ಹಣ ಹಿಂದಿರುಗಿಸಿರಲಿಲ್ಲ.
ಹಾಗಾಗಿ ಕಿರಣ್ ಆಗಾಗ ಮನೆಗೆ ಬಂದು ಕಿರುಕುಳ ನೀಡುತ್ತಿದ್ದ.ಇದರಿಂದ ಬೇಸತ್ತ ಪ್ರಸಾದ್ ಡೆತ್ ನೋಟ್ ಬರೆದು ನಾಪತ್ತೆಯಾಗಿದ್ದರು.

ಇದೀಗ ಹೆಚ್.ಡಿ.ಕೋಟೆ ಸರಗೂರಿನಲ್ಲಿ ಪ್ರಸಾದ್ ಮೃತದೇಹ ದೊರೆತಿದ್ದು,ಪ್ರಸಾದ್ ಆತ್ಮಹತ್ಯೆಗೆ ಶರಣಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಸರಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು‌ ಮುಂದಿನ ಕ್ರಮ ಕೈಗೊಂಡಿದ್ದಾರೆ.


Share this with Friends

Related Post