Fri. Jun 5th, 2026

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಗಮನಕ್ಕೆ: ಹಿಂದಿ ಪರೀಕ್ಷೆ ದಿನಾಂಕ ಬದಲಾವಣೆ

Board-Exam
Share this with Friends

ಬೆಂಗಳೂರು: ಮಹಾವೀರ ಜಯಂತಿ ಪ್ರಯುಕ್ತ ಸರ್ಕಾರಿ ರಜಾ ದಿನದಲ್ಲಿ ಬದಲಾವಣೆಯಾಗಿರುವ ಕಾರಣ, ಮಾರ್ಚ್ 30ರಂದು ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ (SSLC) ತೃತೀಯ ಭಾಷೆ ಪರೀಕ್ಷೆಯನ್ನು ಮರುನಿಗದಿಪಡಿಸಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ತಿಳಿಸಿದೆ.

ಈ ಮೊದಲು ಮಾರ್ಚ್ 31ರಂದು ನಿಗದಿಯಾಗಿದ್ದ ಮಹಾವೀರ ಜಯಂತಿ ರಜೆಯನ್ನು ಸರ್ಕಾರವು ಮಾರ್ಚ್ 30ಕ್ಕೆ (ಸೋಮವಾರ) ಬದಲಾಯಿಸಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪರೀಕ್ಷಾ ವೇಳಾಪಟ್ಟಿಯಲ್ಲಿ ಈ ಕೆಳಗಿನ ಮಾರ್ಪಾಡು ಮಾಡಲಾಗಿದೆ:

ಮರುನಿಗದಿಯಾದ ಪರೀಕ್ಷೆ: ತೃತೀಯ ಭಾಷೆ (Third Language).

ಹಳೆಯ ದಿನಾಂಕ: 30-03-2026 (ಸೋಮವಾರ).

ಹೊಸ ದಿನಾಂಕ: 31-03-2026 (ಮಂಗಳವಾರ).

ಪರೀಕ್ಷೆಯ ಸಮಯ ಮತ್ತು ಸ್ಥಳದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ತೃತೀಯ ಭಾಷೆ ಪರೀಕ್ಷೆಯನ್ನು ಹೊರತುಪಡಿಸಿ, ವೇಳಾಪಟ್ಟಿಯಲ್ಲಿರುವ ಉಳಿದ ಎಲ್ಲಾ ವಿಷಯಗಳ ಪರೀಕ್ಷೆಗಳು ಮೊದಲೇ ನಿಗದಿಯಾದ ದಿನಾಂಕಗಳಂದೇ ಯಥಾವತ್ತಾಗಿ ನಡೆಯಲಿವೆ ಎಂದು ಮಂಡಲಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

 


Share this with Friends

Related Post