Fri. Oct 2nd, 2026

ಪ್ರಯಾಣಿಕರ ಗಮನಕ್ಕೆ: ಅಕ್ಟೋಬರ್ 3 ರಂದು ನಮ್ಮ ಮೆಟ್ರೋ ಸಂಚಾರ ಸಮಯ ವಿಸ್ತರಣೆ – ಬಿಎಂಆರ್‌ಸಿಎಲ್ ಪ್ರಕಟಣೆ

Share this with Friends

ಬೆಂಗಳೂರು: ರಾಜಧಾನಿಯ ಮೆಟ್ರೋ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಮತ್ತು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಮಹತ್ವದ ನಿರ್ಧಾರ ಕೈಗೊಂಡಿದೆ. ಅಕ್ಟೋಬರ್ 3, 2026 ರಂದು ನಮ್ಮ ಮೆಟ್ರೋ ರೈಲು ಸೇವೆಯ ಸಮಯವನ್ನು ವಿಸ್ತರಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕೃತ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ವಿವಿಧ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ಮೆಟ್ರೋ ರೈಲುಗಳು ಹೊರಡುವ ಪರಿಷ್ಕೃತ ಸಮಯದ ವಿವರಗಳು ಈ ಕೆಳಗಿನಂತಿವೆ:

ನೇರಳೆ ಮಾರ್ಗ (Purple Line):

ವೈಟ್‌ಫೀಲ್ಡ್ (ಕಾಡುಗೋಡಿ) ನಿಲ್ದಾಣದಿಂದ – ರಾತ್ರಿ 12:00 ಗಂಟೆಗೆ

ಚಲ್ಲಘಟ್ಟ ನಿಲ್ದಾಣದಿಂದ – ರಾತ್ರಿ 12:20 ಗಂಟೆಗೆ

ಹಸಿರು ಮಾರ್ಗ (Green Line):

ಮಾದಾವರ ನಿಲ್ದಾಣದಿಂದ – ರಾತ್ರಿ 12:15 ಗಂಟೆಗೆ

ಸಿಲ್ಕ್ ಇನ್‌ಸ್ಟಿಟ್ಯೂಟ್ ನಿಲ್ದಾಣದಿಂದ – ರಾತ್ರಿ 12:20 ಗಂಟೆಗೆ

ಹಳದಿ ಮಾರ್ಗ (Yellow Line):

ಆರ್.ವಿ. ರಸ್ತೆ ನಿಲ್ದಾಣದಿಂದ – ರಾತ್ರಿ 1:15 ಗಂಟೆಗೆ

ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಿಲ್ದಾಣದಿಂದ – ರಾತ್ರಿ 11:55 ಗಂಟೆಗೆ

ಮೆಜೆಸ್ಟಿಕ್‌ನಿಂದ ಕೊನೆಯ ರೈಲು:

ನಗರದ ಪ್ರಮುಖ ಜಂಕ್ಷನ್ ಆದ ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್) ಇಂಟರ್‌ಚೇಂಜ್‌ನಿಂದ ಎಲ್ಲಾ ದಿಕ್ಕುಗಳಿಗೂ ಸಂಚರಿಸುವ ಕೊನೆಯ ಸಂಪರ್ಕ ರೈಲು ರಾತ್ರಿ 12:55 ಗಂಟೆಗೆ ಹೊರಡಲಿದೆ.

ಪ್ರಮುಖ ಸೂಚನೆಗಳು:

ಮೆಟ್ರೋ ನಿಲ್ದಾಣಗಳ ಟಿಕೆಟ್ ಕೌಂಟರ್‌ಗಳಲ್ಲಿ ಉಂಟಾಗುವ ಜನದಟ್ಟಣೆಯನ್ನು ತಪ್ಪಿಸಲು ಪ್ರಯಾಣಿಕರು ಮುಂಚಿತವಾಗಿಯೇ ಕ್ಯುಆರ್ (QR) ಟಿಕೆಟ್, ಸ್ಮಾರ್ಟ್ ಕಾರ್ಡ್ ಅಥವಾ ಎನ್‌ಸಿಎಂಸಿ (NCMC) ಕಾರ್ಡ್‌ಗಳನ್ನು ಬಳಸುವಂತೆ ನಿಗಮವು ಕೋರಿದೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸುವ ನಿರೀಕ್ಷೆ ಇರುವುದರಿಂದ, ಸುರಕ್ಷಿತ ಹಾಗೂ ಸುಗಮ ಪ್ರಯಾಣಕ್ಕಾಗಿ ಸಾರ್ವಜನಿಕರು ಮೆಟ್ರೋ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕೆಂದು ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಯವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

 

 


Share this with Friends

Related Post