ವರದಿ: ವಿಕಿಲ ಎಸ್.ಹಿರೇಮಠ
ಕಾಗವಾಡ: ಅಂತರರಾಜ್ಯ ಬೈಕ ಕಳ್ಳನನ್ನು ಬಂಧಿಸಿ ಮೂರು ಬೈಕಗಳನ್ನ ವಶಪಡಿಸಿಕೊಂಡು ಆರೋಪಿಯನ್ನು ಜೈಲುಗಟ್ಟುವಲ್ಲಿ ಕಾಗವಾಡ ಪೊಲೀಸರು ಯಶಸ್ವಿಯಾಗಿದ್ದಾರೆ.
ರಂಜೀತ ಶ್ರೀರಂಗ ಲೋಖಂಡೆ(25) ಬಂಧಿತ ಆರೋಪಿಯಾಗಿದ್ದು , ಕಾಗವಾಡ ತಾಲೂಕಿನ ಮಂಗಸೂಳಿಯ ಮಲ್ಲರವಾಡಿಯ ನಿವಾಸಿಯಾಗಿದ್ದಾನೆ. ಕಳೆದ ತಿಂಗಳು ಶಿರಗುಪ್ಪಿಯ ಪ್ರವೀಣ ಅಶೋಕ ಹೇಮಗಿರೆ ವ್ಯಕ್ತಿಯು ತಮ್ಮ ಬೈಕ ಕಳ್ಳತನವಾಗಿದೆ ಎಂದು ದೂರು ನೀಡಿದ್ದರು.

ದೂರಿನ್ವಯ ಬೆಳಗಾವಿ ಎಸ್ಪಿ ಕೆ. ರಾಮರಾಜನ, ಹೆಚ್ಚುವರಿ ಎಸ್ಪಿ ಆರ್. ಬಿ ಬಸರಗಿ, ಅಥಣಿ ಡಿವೈಎಸ್ಪಿ ಪ್ರಶಾಂತ ಮುನ್ನೋಳಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ಸಂತೋಷ ಹಳ್ಳೂರ, ಪಿಎಸ್ಐ ರಾಘವೇಂದ್ರ ಖೋತ ಅವರ ನೇತೃತ್ವದ ತನಿಖಾ ತಂಡ ಆರೋಪಿ ಕೈಗೆ ಕೋಳ ತೊಡಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ ವರ್ಗದವರಿಗೆ ಎಸ್ಪಿ ಕೆ.ರಾಮರಾಜನ ಶ್ಲಾಘಿಸಿದ್ದಾರೆ.

