Thu. Jun 11th, 2026

ಪ್ರಧಾನಿ ಮೋದಿ ಸಾಧನೆಗೆ ಕಿಚ್ಚ ಸುದೀಪ್ ಸಲಾಂ: ಸೋಶಿಯಲ್ ಮೀಡಿಯಾದಲ್ಲಿ ನಟನ ಪೋಸ್ಟ್ ವೈರಲ್!

Share this with Friends

ಬೆಂಗಳೂರು: ದೇಶದಲ್ಲಿ ಅತಿ ಸುದೀರ್ಘ ಅವಧಿಗೆ ಜನಪ್ರಿಯ ಪ್ರಧಾನಿಯಾಗಿ ಚುನಾಯಿತರಾಗಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ಅವರ ಐತಿಹಾಸಿಕ ಸಾಧನೆ ಹಾಗೂ ಬದ್ಧತೆಯನ್ನು ಸ್ಯಾಂಡಲ್‌ವುಡ್ ಸ್ಟಾರ್, ನಟ ಕಿಚ್ಚ ಸುದೀಪ್ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿರುವ ಅವರು ಪ್ರಧಾನಿಗಳಿಗೆ ಗೌರವಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

“ಭಾರತದ ಇತಿಹಾಸದಲ್ಲೇ ಅತಿ ಸುದೀರ್ಘ ಅವಧಿಗೆ ಜನರಿಂದ ಚುನಾಯಿತರಾಗಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಈ ಸಾಧನೆಯನ್ನು ನಾವೆಲ್ಲರೂ ಒಂದು ಕ್ಷಣ ನಿಂತು ಹೆಮ್ಮೆಯಿಂದ ಗುರುತಿಸಬೇಕಾಗಿದೆ” ಎಂದು ಸುದೀಪ್ ಹೇಳಿದ್ದಾರೆ.

ಅದೇ ಶಕ್ತಿ, ಅದೇ ವೇಗ:

ಕಳೆದ 12 ವರ್ಷಗಳಿಂದ ದೇಶವನ್ನು ಮುನ್ನಡೆಸುತ್ತಿರುವ ಪ್ರಧಾನಿಯವರ ಕಾರ್ಯವೈಖರಿಯನ್ನು ಕೊಂಡಾಡಿರುವ ಅವರು, “ಕಳೆದ 12 ವರ್ಷಗಳಿಂದಲೂ ಮೋದಿ ಅವರು ಯಾವುದೇ ಆಯಾಸವಿಲ್ಲದೆ, ಅದೇ ಶಕ್ತಿ ಹಾಗೂ ಅದೇ ವೇಗದೊಂದಿಗೆ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸದ ವೇಗ ಎಲ್ಲೂ ಕುಗ್ಗಿಲ್ಲ” ಎಂದು ಬರೆದುಕೊಂಡಿದ್ದಾರೆ.

 ನರೇಂದ್ರ ಮೋದಿ ಅವರ ನಿರಂತರ ದೇಶಸೇವೆ, ಸಮರ್ಪಣಾ ಭಾವ ಮತ್ತು ಈ ಅಭೂತಪೂರ್ವ ಸಾಧನೆಗೆ ನನ್ನ ಹೃದಯಪೂರ್ವಕ ಸಲಾಂ. ಇದು ಪ್ರತಿಯೊಬ್ಬರಿಗೂ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ಮುಂಬರುವ ದಿನಗಳಲ್ಲೂ ಅವರಿಗೆ ಸದಾ ಯಶಸ್ಸು ಸಿಗಲಿ ಹಾಗೂ ಅವರ ಮುಂದಿನ ಹಾದಿ ಶುಭದಾಯಕವಾಗಿರಲಿ ಎಂದು ಹಾರೈಸುತ್ತೇನೆ” ಎಂದು ಕಿಚ್ಚ ಸುದೀಪ್ ತಮ್ಮ ಪೋಸ್ಟ್‌ನಲ್ಲಿ ಗೌರವಪೂರ್ವಕವಾಗಿ ಆಶಿಸಿದ್ದಾರೆ.

 

 

 


Share this with Friends

Related Post