Mon. Jul 6th, 2026

ನಟ ಸುದೀಪ್‌ ಬದುಕನ್ನೇ ಬದಲಿಸಿದ ಆ ಎರಡು ಸಿನಿಮಾಗಳು ಯಾವುವು ಗೊತ್ತಾ? ಕಿಚ್ಚನ ಪೋಸ್ಟ್ ವೈರಲ್!

Share this with Friends

ಬೆಂಗಳೂರು: ಕನ್ನಡ ಚಿತ್ರರಂಗದ ತಾರಾನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತಮ್ಮ ನಟನಾ ಬದುಕಿಗೆ ಬಿಗ್ ಬ್ರೇಕ್ ಹಾಗೂ ಜಾಗತಿಕ ಮನ್ನಣೆ ತಂದುಕೊಟ್ಟ ‘ಹುಚ್ಚ’ ಮತ್ತು ‘ಈಗ’ ಸಿನಿಮಾಗಳನ್ನು ನೆನೆದು ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

ತಮ್ಮ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, “ಈ ಎರಡು ಮರೆಯಲಾಗದ ರತ್ನಗಳನ್ನು ನನಗೆ ಉಡುಗೊರೆಯಾಗಿ ನೀಡಲು ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಇವು ನನ್ನ ಹೃದಯದಲ್ಲಿ ಶಾಶ್ವತವಾಗಿ ಕೆತ್ತಲ್ಪಟ್ಟಿವೆ” ಎಂದು ಬರೆದುಕೊಂಡಿದ್ದಾರೆ. ಸುದೀಪ್ ಅವರ ಸಿನಿ ಜರ್ನಿಯಲ್ಲಿ 2001ರಲ್ಲಿ ಬಿಡುಗಡೆಯಾದ ‘ಹುಚ್ಚ’ ಸಿನಿಮಾ ಅವರಿಗೆ ‘ಕಿಚ್ಚ’ ಎಂಬ ಹೆಸರನ್ನು ತಂದುಕೊಟ್ಟು ಸ್ಯಾಂಡಲ್‌ವುಡ್‌ನಲ್ಲಿ ಗಟ್ಟಿ ನೆಲೆ ಒದಗಿಸಿದರೆ, 2012ರಲ್ಲಿ ಎಸ್.ಎಸ್. ರಾಜಮೌಳಿ ನಿರ್ದೇಶನದಲ್ಲಿ ಮೂಡಿಬಂದ ‘ಈಗ’ (Eega) ಚಿತ್ರವು ಅವರ ನಟನಾ ಕೌಶಲ್ಯವನ್ನು ಇಡೀ ದೇಶಾದ್ಯಂತ ಕೊಂಡಾಡುವಂತೆ ಮಾಡಿತ್ತು. ಈ ಎರಡು ಕಲ್ಟ್ ಸಿನಿಮಾಗಳು ತಮ್ಮ ಬದುಕನ್ನು ರೂಪಿಸಿದ ನೆನಪನ್ನು ಸುದೀಪ್ ಅವರು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

 


Share this with Friends

Related Post