ಬೆಂಗಳೂರು, ಮೇ.20 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯಲ್ಲಿ ಬಸ್ ಚಾಲಕರ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೆಎಸ್ಆರ್’ಟಿಸಿ ಸಂಸ್ಥೆಯು ತುಮಕೂರು, ಬೆಂಗಳೂರು ಕೇಂದ್ರಿಯ, ಶಿವಮೊಗ್ಗ, ಚಿಕ್ಕಬಳ್ಳಾಪುರ, ಮೈಸೂರು ಸಿಟಿ, ಮಂಗಳೂರು, ಚಾಮರಾಜನಗರ, ಕೋಲಾರ ವಿಭಾಗಗಳಿಗೆ ಬಸ್ ಚಾಲಕರನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಅನುಭವಿ ಚಾಲಕರು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳುವಂತೆ ಮಾಹಿತಿ ನೀಡಲಾಗಿದೆ. ಈ ನೇಮಕಾತಿಯು ಹೊರಗುತ್ತಿಗೆ ಆಧಾರದ ಮೇಲೆ ನಡೆಯುತ್ತಿದ್ದು, ಆಸಕ್ತ ಆರ್ಹರು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಕೆಎಸ್’ಆರ್’ಟಿಸಿ ಸಂಸ್ಥೆಯು ಬೆಂಗಳೂರಿನ ವಿಸ್ಡಂ ಗ್ರೂಪ್ ಮೂಲಕ ಹೊರಗುತ್ತಿಗೆ ಆಧಾರದಲ್ಲಿ ಬಸ್ ಚಾಲಕರಾಗಲು ಬಯಸುವವರು ಈ ಕೂಡಲೆ ಕೆಳಕಂಡ ದಾಖಲೆಗಳೊಂದಿಗೆ www.jobs.wisdomsecurity.in ವೆಬ್ಸೈಟಿಗೆ ಭೇಟಿ ನೀಡಿ ಅಥವಾ wisdomgroups.kar@gmail.com ಈಮೇಲ್ ಮೂಲಕ ಅರ್ಜಿ ಸಲ್ಲಿಸುವಂತೆ ಗುತ್ತಿಗೆ ಪಡೆದು ಸಂಸ್ಥೆ ತಿಳಿಸಿದೆ.
ಸಲ್ಲಿಸಬೇಕಾದ ಅಗತ್ಯ ದಾಖಲಾತಿಗಳು
1. ಆಧಾರ್ ಕಾರ್ಡ್ ಪ್ರತಿ
2. Heavy Badge ಇರುವ ಚಾಲನಾ ಪರವಾನಗಿ ಪ್ರತಿ
3. ಅಂಕಪಟ್ಟಿ ಪ್ರತಿ
4. ಜಾತಿ ಪ್ರಮಾಣ ಪತ್ರ
5. ಪ್ರಚಲಿತ ಜಿಲ್ಲಾ ವೈದ್ಯಕೀಯ ಪ್ರಮಾಣ ಪತ್ರ
6. ಭಾವಚಿತ್ರಗಳು – 3
ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.
1. ಕನಿಷ್ಠ 7ನೇ ತರಗತಿ ಅಥವಾ 10ನೇ ತರಗತಿ ಪಾಸಾಗಿರಬೇಕು.
2. Heavy Badge ಲೈಸನ್ಸ್ ಮಾಡಿಸಿ ಕನಿಷ್ಠ 2 ವರ್ಷಗಳಾಗಿರಬೇಕು.
3. ವಯಸ್ಸಿನ ಮಿತಿ 50 ವರ್ಷ ಮೀರಿರಬಾರದು.
ಹೆಚ್ಚಿನ ವಿವರಗಳಿಗೆ ಮೊ.ಸಂಖ್ಯೆ
9187156688, 7204907555 ಮೊಬೈಲ್ ಸಂಖ್ಯೆಗಳಿಗೆ ಬೆಳಿಗ್ಗೆ 10ರಿಂದ ಸಂಜೆ 5ರ ಒಳಗೆ ಕರೆ ಮಾಡಬಹುದಾಗಿದೆ. ಚಾಲಕರು ಬೇಗ ಬೇಗ ಅರ್ಜಿ ಸಲ್ಲಿಸಿ ಸಂದರ್ಶನದಲ್ಲಿ ಭಾಗವಹಿಸಿ.
ಅಂಚೆ ಮುಖಾಂತರ ಅರ್ಜಿ ಸಲ್ಲಿಸುವವರು #106, 40 ಅಡಿ ರಸ್ತೆ, ಮಂಜುನಾಥನಗರ, ಬೆಂಗಳೂರು – 560010 ಈ ವಿಳಾಸಕ್ಕೆ ಕಳುಹಿಸಲು ತಿಳಿಸಿದೆ.

