Sat. Jun 6th, 2026

‘ದಿ ರಿಯಲ್ ಪ್ರಜಾಕೀಯ’ ಆಪ್ ಲೋಕಾರ್ಪಣೆ

Share this with Friends

ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನೇ ಮಾಲೀಕ ಎಂಬ ಪರಿಕಲ್ಪನೆಯನ್ನು ಸಾಕಾರಗೊಳಿಸಲು ‘ದಿ ರಿಯಲ್ ಪ್ರಜಾಕೀಯ’ ತಂಡವು ನೂತನ ತಾಂತ್ರಿಕ ವೇದಿಕೆಯನ್ನು ಸಿದ್ಧಪಡಿಸಿದೆ. ಜನಕೇಂದ್ರಿತ ಆಡಳಿತ ಹೇಗಿರಬೇಕು ಎಂಬ ಕನಸನ್ನು ನನಸಾಗಿಸಲು ಆಂಡ್ರಾಯ್ಡ್, ಐಓಎಸ್ ಆಪ್‌ಗಳು ಹಾಗೂ ಪ್ರತ್ಯೇಕ ವೆಬ್‌ಸೈಟ್ ಅನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗಿದೆ.

ಸಣ್ಣ ಹೆಜ್ಜೆಯೇ ದೊಡ್ಡ ಬದಲಾವಣೆ:

ಸಾಮಾನ್ಯವಾಗಿ ವ್ಯವಸ್ಥೆ ಕೆಟ್ಟಿದೆ ಎಂದು ದೂರುವವರೇ ಹೆಚ್ಚು, ಆದರೆ ಅದನ್ನು ಸರಿಪಡಿಸುವ ದಾರಿಯಲ್ಲಿ ನಡೆಯುವವರು ಕಡಿಮೆ. ಈ ನಿಟ್ಟಿನಲ್ಲಿ ‘ಪ್ರತಿಯೊಂದು ದೊಡ್ಡ ಬದಲಾವಣೆಯೂ ಒಂದು ಸಣ್ಣ ಹೆಜ್ಜೆಯಿಂದಲೇ ಆರಂಭವಾಗುತ್ತದೆ’ ಎಂಬ ಆಶಯದೊಂದಿಗೆ ಈ ಆಪ್ ರೂಪಿಸಲಾಗಿದೆ. ರಾಜಕೀಯ ಅಂದಾಕ್ಷಣ ಕೇವಲ ವ್ಯಕ್ತಿಪೂಜೆಯಲ್ಲ, ಬದಲಿಗೆ ‘ನೀತಿ’ ಮತ್ತು ‘ಪಾರದರ್ಶಕತೆ’ ಮುಖ್ಯ ಎಂಬುದನ್ನು ಇಲ್ಲಿ ಪ್ರತಿಪಾದಿಸಲಾಗಿದೆ.

ಜನರ ಕೈಗೆ ಅಧಿಕಾರ:

ಈ ವೇದಿಕೆಯ ಮೂಲಕ ಪ್ರತಿಯೊಬ್ಬ ಪ್ರಜೆಯೂ ಆಡಳಿತದ ಪ್ರಕ್ರಿಯೆಯಲ್ಲಿ ಭಾಗಿಯಾಗಬಹುದು. ಚುನಾಯಿತ ಪ್ರತಿನಿಧಿಗಳು ಕೇವಲ ಜನರ ಸೇವಕರಾಗಿ (Workers) ಕೆಲಸ ಮಾಡುವ ಮಾದರಿಯನ್ನು ಇಲ್ಲಿ ಪರಿಚಯಿಸಲಾಗಿದೆ. ಭ್ರಷ್ಟಾಚಾರ ಮುಕ್ತ ಮತ್ತು ಪಾರದರ್ಶಕ ಆಡಳಿತ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಸಾರ್ವಜನಿಕರು ಈ ಆಪ್ ಮೂಲಕ ಕಣ್ಣಾರೆ ನೋಡಬಹುದಾಗಿದೆ.

ಭಾಗವಹಿಸುವುದು ಹೇಗೆ?

ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ ಕೇವಲ ಕೆಲವು ನಿಮಿಷಗಳನ್ನು ಈ ಆಪ್‌ಗಾಗಿ ಮೀಸಲಿಡುವಂತೆ ಮನವಿ ಮಾಡಲಾಗಿದೆ. ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರು ಕೆಳಗಿನ QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಥವಾ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಈ ಹೊಸ ವ್ಯವಸ್ಥೆಯ ಭಾಗವಾಗಬಹುದು. “ವ್ಯವಸ್ಥೆ ಬದಲಾಗುವುದಿಲ್ಲ ಎಂದು ನಿರ್ಲಕ್ಷ್ಯ ಮಾಡಬೇಡಿ, ಒಮ್ಮೆ ಈ ಜನಕೇಂದ್ರಿತ ಮಾದರಿಯನ್ನು ಗಮನಿಸಿ” ಎಂದು ತಂಡವು ಕೋರಿದೆ

 


Share this with Friends

Related Post