ವರದಿ: ವಿಕಿಲ ಎಸ್ ಹಿರೇಮಠ
ಕಾಗವಾಡ: ಕಾಗವಾಡ ಪಟ್ಟಣದಲ್ಲಿ 450 ವರ್ಷದ ಇತಿಹಾಸ ಹೊಂದಿದ್ದ ಕಾರುಹುಣ್ಣಿಮೆಯನ್ನು ಅತೀ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು ಅಥಣಿ ಉಪವಿಭಾಗದ ಆರು ಪೊಲೀಸ್ ಠಾಣೆಯ ವ್ಯಾಪ್ತಿಯ 52 ಪೊಲೀಸ್ ಅಧಿಕಾರಿಗೊಳಗೊಂಡು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ರವಿವಾರದಂದು ಸಂಜೆ ನಡೆಯಲಿರುವ ಈ ಕಾರುಹುಣ್ಣಿಮೆ ಕಾರ್ಯಕ್ರಮಕ್ಕೆ ಬೀಗಿ ಬಂದೊಬಸ್ತದಲ್ಲಿ ನಿಯೋಜಿಸಲಾದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಪಿಎಸ್ಐ ರಾಘವೇಂದ್ರ ಖೋತ ಅವರು ಸಲಹೆ ಸೂಚನೆಗಳನ್ನು ನೀಡಿದರು.
ಈ ಸಮಯದಲ್ಲಿ ಪ್ರೋಬೇಷಬರಿ ಪಿಎಸ್ಐ ಶ್ರೀಕುಮಾರ ದೇಸಾಯಿ, ಎಎಸ್ಐ. ಬೀರಪ್ಪಾ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

