ಬೆಂಗಳೂರು: ರಾಜಧಾನಿಯ ನಮ್ಮ ಮೆಟ್ರೋ ಪ್ರಯಾಣಿಕರ ಗಮನಕ್ಕೆ ಬಿಎಂಆರ್‌ಸಿಎಲ್ (BMRCL) ಪ್ರಮುಖ ಪ್ರಕಟಣೆಯೊಂದನ್ನು ಹೊರಡಿಸಿದೆ.
ಹಸಿರು ಮಾರ್ಗದಲ್ಲಿ ಹೊಸ ಸಿಆರ್‌ಆರ್‌ಸಿ (CRRC) ರೈಲುಗಳ ಸಂಚಾರ ಆರಂಭಿಸುವ ಮುನ್ನ ಮೆಟ್ರೋ ರೈಲು ಸುರಕ್ಷತಾ ಆಯುಕ್ತರ (CMRS) ಪರಿಶೀಲನೆಗೆ ಪೂರ್ವಭಾವಿಯಾಗಿ ಜಂಟಿ ಪ್ರಾಯೋಗಿಕ ಸಂಚಾರ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 7ರ ಶುಕ್ರವಾರ ರಾತ್ರಿ ಹಸಿರು ಮಾರ್ಗದ ರೈಲು ಸೇವೆಗಳಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ.
ಶುಕ್ರವಾರ ರಾತ್ರಿ 10:30ರಿಂದ ರಾತ್ರಿ 11:00 ಗಂಟೆ ಹಾಗು ಅಂದಿನ ಸೇವೆ ಮುಕ್ತಾಯದವರೆಗಿನ ಅವಧಿಯಲ್ಲಿ ಯಶವಂತಪುರದಿಂದ ಮಾದಾವರ ನಿಲ್ದಾಣಗಳ ಕಡೆಗೆ ಸಂಚರಿಸುವ ಮೆಟ್ರೋ ರೈಲುಗಳು ಎಂದಿನಂತೆ 10 ನಿಮಿಷಗಳ ಅಂತರದ ಬದಲಿಗೆ ಪ್ರತಿ 20 ನಿಮಿಷಗಳಿಗೊಮ್ಮೆ ಚಲಿಸಲಿವೆ.
ಆದರೆ ಮಾದಾವರದಿಂದ ರೇಷ್ಮೆ ಸಂಸ್ಥೆಯ ಕಡೆಗೆ ಸಂಚರಿಸುವ ಮೆಟ್ರೋ ರೈಲುಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪ್ರಯಾಣಿಕರು ಈ ಸಮಯದ ವ್ಯತ್ಯಾಸವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಬೇಕಾಗಿ ಹಾಗೂ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ವಿನಂತಿಸಿದ್ದಾರೆ.

