Fri. Jul 17th, 2026

ನಮ್ಮ ಮೆಟ್ರೋ ಪ್ರಯಾಣಿಕರ ಗಮನಕ್ಕೆ: ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ ಭಾರಿ ದಂಡ; ಗರಿಷ್ಠ ₹25,000 ವರೆಗೆ ಪೆನಾಲ್ಟಿ!

Share this with Friends

ಬೆಂಗಳೂರು: ಸಿಲಿಕಾನ್ ಸಿಟಿಯ ಲೈಫ್‌ಲೈನ್ ಆಗಿರುವ ‘ನಮ್ಮ ಮೆಟ್ರೋ’ದಲ್ಲಿ ಇನ್ಮುಂದೆ ಪ್ರಯಾಣಿಕರು ಹೆಚ್ಚು ಶಿಸ್ತು ಪಾಲಿಸಬೇಕಾಗಿದೆ. ಮೆಟ್ರೋ ನಿಲ್ದಾಣ ಮತ್ತು ರೈಲುಗಳ ಒಳಗೆ ನಿಯಮಗಳನ್ನು ಗಾಳಿಗೆ ತೂರಿ ಹುಚ್ಚಾಟ ಆಡುವ ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಬರೋಬ್ಬರಿ 25,000 ರೂಪಾಯಿಗಳವರೆಗೆ ದುಬಾರಿ ದಂಡ ವಿಧಿಸಲು ಸಿದ್ಧತೆ ನಡೆಸಿದೆ.

ಕೇಂದ್ರ ಸರ್ಕಾರದ ನೂತನ ತಿದ್ದುಪಡಿ ನಿಯಮಗಳ ಅನ್ವಯ ಬಿಎಂಆರ್‌ಸಿಎಲ್ ಈ ಕಠಿಣ ಕ್ರಮಕ್ಕೆ ಮುಂದಾಗಿದೆ.

ಯಾವ ತಪ್ಪುಗಳಿಗೆ ಎಷ್ಟು ದಂಡ?

ಮೆಟ್ರೋ ಟ್ರ್ಯಾಕ್ ನಿಯಮ ಉಲ್ಲಂಘನೆ: ಮೆಟ್ರೋ ಹಳಿಗಳ (Tracks) ಮೇಲೆ ಇಳಿಯುವುದು, ಅನಧಿಕೃತವಾಗಿ ಟ್ರ್ಯಾಕ್ ದಾಟಲು ಯತ್ನಿಸುವುದು ಅಥವಾ ಹಳಿಗಳಿಗೆ ಜಿಗಿದರೆ ₹5,000 ರಿಂದ ₹25,000 ರವರೆಗೆ ಗರಿಷ್ಠ ದಂಡ ವಿಧಿಸಲಾಗುತ್ತದೆ.

ಟಿಕೆಟ್ ಮತ್ತು ಪಾಸ್ ದುರ್ಬಳಕೆ: ಮೆಟ್ರೋ ಟೋಕನ್ ಅಥವಾ ಸ್ಮಾರ್ಟ್ ಕಾರ್ಡ್‌ಗಳನ್ನು ನಿಯಮಬಾಹಿರವಾಗಿ ದುರ್ಬಳಕೆ ಮಾಡಿಕೊಂಡರೆ ₹5,000 ದಿಂದ ₹25,000 ವರೆಗೆ ದಂಡ ತೆರಬೇಕಾಗುತ್ತದೆ.

ಅನಧಿಕೃತ ವ್ಯಾಪಾರ ಮತ್ತು ಪ್ರಚಾರ: ಸೂಕ್ತ ಅನುಮತಿ ಇಲ್ಲದೆ ಮೆಟ್ರೋ ಆವರಣದಲ್ಲಿ ವ್ಯಾಪಾರ ಅಥವಾ ಜಾಹೀರಾತು ಪ್ರಚಾರ ನಡೆಸಿದರೆ ₹5,000 ನೇರ ದಂಡ ಬೀಳಲಿದೆ.

ರೀಲ್ಸ್ ಹುಚ್ಚಾಟ ಮತ್ತು ಲೌಡ್ ಮ್ಯೂಸಿಕ್: ಮೆಟ್ರೋ ಒಳಗೆ ಮೊಬೈಲ್ ರೀಲ್ಸ್ ಮಾಡುವುದು, ನೆಲದ ಮೇಲೆ ಕುಳಿತುಕೊಳ್ಳುವುದು, ಆಹಾರ ಸೇವಿಸುವುದು ಅಥವಾ ಹೆಡ್‌ಫೋನ್ ಇಲ್ಲದೆ ದೊಡ್ಡದಾಗಿ ಮ್ಯೂಸಿಕ್ ಹಾಕಿ ಸಹಪ್ರಯಾಣಿಕರಿಗೆ ತೊಂದರೆ ನೀಡಿದರೆ ಇನ್ಮುಂದೆ ₹2,500 ರಿಂದ ₹10,000 ವರೆಗೆ ದುಬಾರಿ ದಂಡ ವಿಧಿಸಲಾಗುತ್ತದೆ.ಮೆಟ್ರೋ ಆವರಣದಲ್ಲಿ ಪ್ರತಿಭಟನೆ ನಡೆಸಿದಲ್ಲಿ ₹10,000 ವರೆಗೆ ದುಬಾರಿ ದಂಡ ವಿಧಿಸಲಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಮೆಟ್ರೋ ಒಳಗೆ ರೀಲ್ಸ್ ಮಾಡುವ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಬಿಎಂಆರ್‌ಸಿಎಲ್ ಈ ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿದೆ.

 


Share this with Friends

Related Post