Tue. Sep 22nd, 2026

ಸೆ. 27ಕ್ಕೆ ಬೆಂಗಳೂರಿನಲ್ಲಿ ‘ಸಾಹಸಸಿಂಹ’ ಡಾ. ವಿಷ್ಣುವರ್ಧನ್ ಲೇಸರ್ ಶೋ ಧಮಾಕಾ!

Share this with Friends

ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅಭಿನಯ ಭಾರ್ಗವ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಮಹಾನ್ ಕಲಾ ಪಯಣವನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸುವ ಬೃಹತ್ ಲೇಸರ್ ಪ್ರದರ್ಶನವನ್ನು (Laser Show) ಹಮ್ಮಿಕೊಳ್ಳಲಾಗಿದೆ. ಡಾ. ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವದ (75ನೇ ಜನ್ಮದಿನೋತ್ಸವ) ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಈ ವಿಶಿಷ್ಟ ಕಾರ್ಯಕ್ರಮವು ಸಿಲಿಕಾನ್ ಸಿಟಿಯಲ್ಲಿ ಧೂಳೆಬ್ಬಿಸಲು ಸಜ್ಜಾಗಿದೆ.

ಡಾ. ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವ ಸಮಿತಿಯ ಪ್ರಮುಖರಾದ ವೀರಕಪುತ್ರ ಶ್ರೀನಿವಾಸ ಹಾಗೂ ವಿಷ್ಣು ಸೇನಾ ಸಾರ್ವಜನಿಕ ಬಳಗದ ವತಿಯಿಂದ ಈ “ಅಭಿಮಾನದ ಪರಾಕಾಷ್ಠೆ”ಯ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.

ಕಣ್ಣು ತುಂಬಿಸಲಿರುವ ದೃಶ್ಯ ವೈಭವ:

ಕೋಟಿಗೊಬ್ಬ ನಟನ ಐದು ದಶಕಗಳ ಸಿನಿಮೀಯ ಸಾಹಸ ಹಾಗೂ ಅಪ್ರತಿಮ ನಟನಾ ಪರ್ವವನ್ನು ಲೇಸರ್ ಕಿರಣಗಳ ಮೂಲಕ ತೆರೆಯ ಮೇಲೆ ತರಲಾಗುತ್ತಿದೆ. ಇದು ಕೇವಲ ಪ್ರದರ್ಶನವಾಗಿರದೆ, ವಿಷ್ಣು ಅಭಿಮಾನಿಗಳ ಮೈಮನ ರೋಮಾಂಚನಗೊಳಿಸುವಂತಹ ಶಕ್ತ ಪರಿಕಲ್ಪನೆಯೊಂದಿಗೆ ಸಿದ್ಧವಾಗುತ್ತಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಭಾನುವಾರ, ಸೆಪ್ಟೆಂಬರ್ 27 ರಂದು ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್‌ನಲ್ಲಿ ಈ ಐತಿಹಾಸಿಕ ಕಾರ್ಯಕ್ರಮ ಜರುಗಲಿದ್ದು, ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ನಿರಂತರವಾಗಿ ಅಭಿಮಾನಿ ಹಬ್ಬ ನಡೆಯಲಿದೆ.

ಇದೇ ವೇಳೆ, ಕಾರ್ಯಕ್ರಮದ ಕುರಿತಾದ ಮತ್ತೊಂದು ರೋಮಾಂಚನಕಾರಿ ಹಾಗೂ ಅತ್ಯಂತ ವಿಶೇಷವಾದ ಸರ್ಪ್ರೈಸ್ ಅಪ್‌ಡೇಟ್ ಅನ್ನು ಬುಧವಾರ ಸಂಜೆ ಅಧಿಕೃತವಾಗಿ ಪ್ರಕಟಿಸುವುದಾಗಿ ವೀರಕಪುತ್ರ ಶ್ರೀನಿವಾಸ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದು, ಚಿತ್ರರಂಗ ಹಾಗೂ ಕೋಟ್ಯಂತರ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

 

 


Share this with Friends

Related Post