ಬೆಂಗಳೂರು:ದೂರಶಿಕ್ಷಣದ ಮೂಲಕ ಉನ್ನತ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಪ್ರಸಕ್ತ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಯ ಪ್ರವೇಶಾತಿ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿದೆ. ಈ ಕುರಿತು ಮುಕ್ತ ವಿಶ್ವವಿದ್ಯಾನಿಲಯದ ಬೆಂಗಳೂರು ಪ್ರಾದೇಶಿಕ ಕೇಂದ್ರವು ಪ್ರಕಟಣೆ ಹೊರಡಿಸಿದೆ.
ನ್ಯಾಕ್ ‘A+’ ಮಾನ್ಯತೆಯ ಹೆಗ್ಗಳಿಕೆ:
ವಿಶ್ವವಿದ್ಯಾಲಯದ ಎಲ್ಲಾ ದೂರಶಿಕ್ಷಣ ಕೋರ್ಸ್‌ಗಳು ಯುಜಿಸಿ (UGC) ನಿಯಮಾವಳಿಗಳ ಪ್ರಕಾರ ಅಧಿಕೃತ ಅನುಮೋದನೆ ಪಡೆದುಕೊಂಡಿವೆ. ಅಷ್ಟೇ ಅಲ್ಲದೆ, ಈ ಮುಕ್ತ ವಿಶ್ವವಿದ್ಯಾಲಯವು ಪ್ರತಿಷ್ಠಿತ ನ್ಯಾಕ್ (NAAC) ಸಂಸ್ಥೆಯಿಂದ ಅತ್ಯುನ್ನತ ‘A+’ ಮಾನ್ಯತೆ ಗಳಿಸಿದೆ. ಇದರಿಂದಾಗಿ ಇಲ್ಲಿ ಪಡೆಯುವ ಪದವಿಗಳಿಗೆ ದೇಶಾದ್ಯಂತ ಅತ್ಯುತ್ತಮ ಮೌಲ್ಯವಿರಲಿದೆ.
ಲಭ್ಯವಿರುವ ಪ್ರಮುಖ ಕೋರ್ಸ್‌ಗಳು:
ವಿದ್ಯಾರ್ಥಿಗಳಿಗೆ ವಿವಿಧ ಸ್ನಾತಕ (UG), ಸ್ನಾತಕೋತ್ತರ (PG), ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಸೇರಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಸ್ನಾತಕ ಪದವಿಗಳು: ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ, ಬಿ.ಸಿ.ಎ ಮತ್ತು ಬಿ.ಎಸ್.ಡಬ್ಲ್ಯೂ.
ಇತರ ಕೋರ್ಸ್‌ಗಳು: ವಿವಿಧ ವಿಷಯಗಳ ಸ್ನಾತಕೋತ್ತರ ಪದವಿಗಳು, ಪಿಜಿ ಡಿಪ್ಲೊಮಾ ಮತ್ತು ವೃತ್ತಿಪರ ಸರ್ಟಿಫಿಕೇಟ್ ಪ್ರೋಗ್ರಾಂಗಳು.
ಅರ್ಜಿ ಸಲ್ಲಿಕೆಗೆ ಪ್ರಮುಖ ಮಾಹಿತಿ:
ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿಗಳು ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳು ಕರಾಮುವಿಯ ಅಧಿಕೃತ ವೆಬ್‌ಸೈಟ್ www.ksoumysuru.ac.in Online Admission Portal ಮೂಲಕ ಅಥವಾ ಅಗತ್ಯ ದಾಖಲೆಗಳನ್ನು ಕರಾಮುವಿ ಪ್ರಾದೇಶಿಕ ಕೇಂದ್ರ ಬೆಂಗಳೂರು ಹಜ್ ಭವನ ಇಲ್ಲಿ ಸಲ್ಲಿಸಿ ಪ್ರವೇಶಾತಿ ಪಡೆಯಬಹುದಾಗಿರುತ್ತದೆ.
ಆಯಾ ಶಿಕ್ಷಣಕ್ರಮಗಳಿಗೆ ವಿಶ್ವವಿದ್ಯಾನಿಲಯವು ಪ್ರವೇಶಾತಿ ಶುಲ್ಕವನ್ನು ನಿಗದಿಪಡಿಸಿದ್ದು, ವಿವರವನ್ನು ವಿವಿಯ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು ನಿಗದಿತ ಶುಲ್ಕವನ್ನು ಮಾತ್ರ ಆನ್‌ಲೈನ್‌ನಲ್ಲಿ ಪಾವತಿಸಲು ಸೂಚಿಸಲಾಗಿದೆ. ನಿಗದಿತ ಶುಲ್ಕಕ್ಕಿಂತ ಹೆಚ್ಚುವರಿ ಶುಲ್ಕವನ್ನು ಯಾರಿಗೂ ಪಾವತಿಸುವಂತಿಲ್ಲ. ಆದಾಗ್ಯೂ ವಿದ್ಯಾರ್ಥಿಗಳು/ಪೋಷಕರು ಯಾವುದೇ ಹೆಚ್ಚುವರಿ ಶುಲ್ಕ ನೀಡಿದಲ್ಲಿ ವಿವಿ ನಿಲಯವು ಅದಕ್ಕೆ ಜವಾಬ್ದಾರರಾಗಿರುವುದಿಲ್ಲ ಎಂದು ಪ್ರಾದೇಶಿಕ ನಿರ್ದೇಶಕರಾದ ಡಾ. ಗಿರೀಶ ಹೆ.ಚ್.ಎನ್ ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ವಿಶೇಷ ರಿಯಾಯಿತಿಗಳು
ಬಿ.ಪಿ.ಎಲ್. ಕಾರ್ಡ್ ಹೊಂದಿರುವ ಅರ್ಹ ಮಹಿಳಾ ವಿದ್ಯಾರ್ಥಿಗಳಿಗೆ, ಡಿಫೆನ್ಸ್ ಹಾಗೂ ಎಕ್ಸ್ ಸರ್ವಿಸ್ ಮನ್ ವಿದ್ಯಾರ್ಥಿಗಳಿಗೆ, ಆಟೋ ಮತ್ತು ಕ್ಯಾಬ್ ಚಾಲಕರು ಮತ್ತು ಅವರ ಪತಿ/ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಮತ್ತು KSRTC/BMTC/NWKRTC/KKRTC ಯಲ್ಲಿನ ನೌಕರರುಗಳಿಗೆ ಬೋಧನಾ ಶುಲ್ಕದಲ್ಲಿ ಮಾತ್ರ ಶೇ.10% ರಷ್ಟು ರಿಯಾಯಿತಿ ಇರುತ್ತದೆ (UG & PG Degree Programs Only).
ಕೋವಿಡ್-2019 ಸಾಂಕ್ರಾಮಿಕ ರೋಗದಿಂದ ಮೃತರಾದ ಆ ತಂದೆ/ತಾಯಿಯ ಮಕ್ಕಳಿಗೆ ಅವರು ಅರ್ಹತೆ ಹೊಂದಿ ಪ್ರದೇಶ ಬಯಸುವ ಶಿಕ್ಷಣಕ್ರಮಗಳಿಗೆ ಪೂರ್ಣ ಶುಲ್ಕ ವಿನಾಯಿತಿ ಇರುತ್ತದೆ.
ಶೇ.50 ಕ್ಕೂ ಹೆಚ್ಚಿನ ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳಿಗೆ (B.Ed & M.B.A ಕಾರ್ಯಕ್ರಮಗಳಿಗೆ ಹೊರತುಪಡಿಸಿ) ಪೂರ್ಣ ಶುಲ್ಕ ವಿನಾಯಿತಿ ಇರುತ್ತದೆ.
ತೃತೀಯ ಲಿಂಗ (Transgender) ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ ಇರುತ್ತದೆ.
SC/ST ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ಒದಗಿಸಿ ಸರ್ಕಾರದ SSP ಮುಖಾಂತರ ವಿದ್ಯಾರ್ಥಿ ವೇತನ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:- ಪ್ರಾದೇಶಿಕ ನಿರ್ದೇಶಕರು, ಕರಾಮುವಿ ಬೆಂಗಳೂರು ಪ್ರಾದೇಶಿಕ ಕೇಂದ್ರ ಹಜ್ ಭವನ, ತಿರುಮೇನಹಳ್ಳಿ ಕ್ರಾಸ್, ಹೆಗಡೆನಗರ ಮುಖ್ಯ ರಸ್ತೆ ಬೆಂಗಳೂರು-560064 ದೂರವಾಣಿ ಸಂಖ್ಯೆ:- 9448668880 ಅನ್ನು ಸಂಪರ್ಕಿಸಬಹುದಾಗಿದೆ.

