Tue. Aug 18th, 2026

ವೃತ್ತಿಪರ ಡಿಪ್ಲೊಮಾ ಸೀಟು ಹಂಚಿಕೆ: ಆಪ್ಷನ್ ಎಂಟ್ರಿಗೆ ಆ.21 ಕೊನೆ ದಿನ; ಬಿ-ಫಾರ್ಮಾ ವೇಳಾಪಟ್ಟಿಯೂ ಪ್ರಕಟ

Share this with Friends

ಬೆಂಗಳೂರು:ಎಂಜಿನಿಯರಿಂಗ್ 3ನೇ ಸೆಮಿಸ್ಟರ್‌ಗೆ ನೇರ ಪ್ರವೇಶ ಬಯಸುವ ವೃತ್ತಿಪರ ಡಿಪ್ಲೊಮಾ (Working Professional) ಅಭ್ಯರ್ಥಿಗಳ ಮೊದಲ ಸುತ್ತಿನ ಸೀಟು ಹಂಚಿಕೆಯ ಪ್ರಕ್ರಿಯೆ ಆರಂಭವಾಗಿದ್ದು, ಇಚ್ಛೆಗಳನ್ನು ದಾಖಲಿಸಲು (Options Entry) ಆಗಸ್ಟ್ 21ರವರೆಗೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ ತಿಳಿಸಿದ್ದಾರೆ.

ಡಿಪ್ಲೊಮಾ ಅಭ್ಯರ್ಥಿಗಳ ವೇಳಾಪಟ್ಟಿ:

ಆಪ್ಷನ್ ಎಂಟ್ರಿ ಕೊನೆಯ ದಿನ: ಆಗಸ್ಟ್ 21

ತಾತ್ಕಾಲಿಕ ಫಲಿತಾಂಶ: ಆಗಸ್ಟ್ 21 (ಮಧ್ಯಾಹ್ನ 2:00 ಗಂಟೆಗೆ)

ಅಂತಿಮ ಫಲಿತಾಂಶ ಪ್ರಕಟಣೆ: ಆಗಸ್ಟ್ 22 (ಬೆಳಿಗ್ಗೆ 11:00 ಗಂಟೆಗೆ)

ಶುಲ್ಕ ಪಾವತಿ ಮತ್ತು ಚೀಟಿ ಡೌನ್‌ಲೋಡ್: ಆಗಸ್ಟ್ 24 ರಿಂದ 25

ಕಾಲೇಜಿಗೆ ವರದಿ ಮಾಡಲು ಕೊನೆ ದಿನ: ಆಗಸ್ಟ್ 26

ಬಿ-ಫಾರ್ಮಾ ಲ್ಯಾಟರಲ್ ಪ್ರವೇಶದ ವೇಳಾಪಟ್ಟಿ:

ಇದೇ ವೇಳೆ 2026ನೇ ಸಾಲಿನ ಬಿ-ಫಾರ್ಮಾ ಲ್ಯಾಟರಲ್ ಪ್ರವೇಶದ ಮೊದಲ ಸುತ್ತಿನ ವೇಳಾಪಟ್ಟಿಯನ್ನೂ ಕೆಇಎ ಪ್ರಕಟಿಸಿದೆ. ಈಗಾಗಲೇ ಅರ್ಹ ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು, ಮುಂದಿನ ಪ್ರಕ್ರಿಯೆಗಳ ವಿವರ ಹೀಗಿದೆ:

ವೆರಿಫಿಕೇಷನ್ ಸ್ಲಿಪ್ ಡೌನ್‌ಲೋಡ್: ಆಗಸ್ಟ್ 19 ಮತ್ತು 20

ಆಪ್ಷನ್ಸ್ ಎಂಟ್ರಿ ಅವಧಿ: ಆಗಸ್ಟ್ 20 ರಿಂದ 23

ತಾತ್ಕಾಲಿಕ ಫಲಿತಾಂಶ: ಆಗಸ್ಟ್ 24

ಅಂತಿಮ ಫಲಿತಾಂಶ ಪ್ರಕಟಣೆ: ಆಗಸ್ಟ್ 25 (ಸಂಜೆ 4:00 ಗಂಟೆಯ ನಂತರ)

ಪ್ರವೇಶ ಪಡೆಯಲು ಕೊನೆಯ ದಿನ: ಆಗಸ್ಟ್ 27 (ಶುಲ್ಕ ಪಾವತಿಸಿ ಕಾಲೇಜಿಗೆ ವರದಿ ಮಾಡಲು)

ಅರ್ಹ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಇಚ್ಛೆಗಳನ್ನು ದಾಖಲಿಸುವಂತೆ ಕಾರ್ಯನಿರ್ವಾಹಕ ನಿರ್ದೇಶಕರು ಸಲಹೆ ನೀಡಿದ್ದಾರೆ.

 


Share this with Friends

Related Post