ಕಾಗವಾಡ: ಕಾಗವಾಡ ಪಟ್ಟಣದಲ್ಲಿ ಪ್ರತಿ ವರ್ಷದಂತೆ ಐತಿಹಾಸಿಕ ಕಾರುಹುಣ್ಣಿಮೆಯನ್ನು ಅದ್ದೂರಿಯಾಗಿ ಆಚರಣೆ ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು ಎಂದು ಪಿಎಸ್ಐ ರಾಘವೇಂದ್ರ ಖೋತ ಹೇಳಿದರು.
ಸೋಮವಾರ ಸಂಜೆ ಶಿವಾನಂದ ಮಹಾವಿದ್ಯಾಲಯದಲ್ಲಿ ಕಾರುಹುಣ್ಣಿಮೆ ನಿಮಿತ್ತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಮಹಾರಾಷ್ಟ್ರ ಪರಂಪರೆ ಇದ್ದು ಈ ಕಾರುಹುಣ್ಣಿಮೆಗೆ ಬಹಳ ಮಹತ್ವವಿದೆ. ಸುಮಾರು 12 ರಿಂದ 15 ಸಾವಿರ ಜನಸಂಖ್ಯೆ ಭಾಗಿಯಾಗುತ್ತಾರೆ ಎಂದರು.
ಈ ಸಮಯದಲ್ಲಿ ಪ್ರೋಬೇಷನರಿ ಪಿಎಸ್ಐ ಶ್ರೀಕುಮಾರ ದೇಸಾಯಿ, ಎಸ್ ಬಿ ಸುರೇಶ್ ನಂದಿವಾಲೆ, ತಾಲೂಕಾಡಳಿತದ ಅಧಿಕಾರಿಗಳು ಸೇರಿದಂತೆ ಪಟ್ಡಣದ ಗಣ್ಯರು ಉಪಸ್ಥಿತರಿದ್ದರು.

