Wed. Jul 22nd, 2026

ಮಾದಕ ವಸ್ತುವಿನಿಂದ ಯುವಕರನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ: ಪಿಎಸ್ಐ ರಾಘವೇಂದ್ರ ಖೋತ

Share this with Friends

ವರದಿ: ವಿಕಿಲ ಎಸ್. ಹಿರೇಮಠ

ಕಾಗವಾಡ: ಯುವಕರು ಮಾದಕ ವ್ಯಸನಿಗೆ ತುತ್ತಾಗಿ ಮಾನಸಿಕ‌ ಹಾಗೂ ದೈಹಿಕವಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬಿರುವುದನ್ನು ತಪ್ಪಿಸಬೇಕು ಎಂದು ಕಾಗವಾಡ ಪಿಎಸ್ಐ ರಾಘವೇಂದ್ರ ಖೋತ ಹೇಳಿದರು.

ಕಾಗವಾಡ ಪಟ್ಟಣ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳಲ್ಲಿ ಮಾದಕ‌ ವಸ್ತುಗಳ ಜಾಗೃತಿ ಅಭಿಯಾನಯನ್ನು ಆಯೋಜಿಸುವ ಮುಖಾಂತರ ವಿದ್ಯಾರ್ಥಿಗಳು ದುಷ್ಟ ಚಟದಿಂದ ದೂರವಿದ್ದು ಒಳ್ಳೆಯ‌ ಸಮಾಜವನ್ನು ನಿರ್ಮಿಸಬೇಕು ಎಂದು ಹೇಳಿದರು.

ಇನ್ನು ಮಾದಕ ವಸ್ತುದಿಂದ ಯುವಕರನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರೀಕ,ಪೋಷಕರು ಹಾಗೂ ನಮ್ಮೆಲ್ಲರ ಕರ್ತವ್ಯವಾಗಿದೆ ತಿಳಿಸಿದರು. ಈ ಸಮಯದಲ್ಲಿ ಪ್ರೋಬೇಷನರಿ ಪಿಎಸ್ಐ ಶ್ರೀಕುಮಾರ ದೇಸಾಯಿ, ಎಎಸ್ಐ ಜಯಂತ ಸೋನಾವಣೆ, ಐ.ಕೆ ಕಾಜಿ, ಬೀರಪ್ಪಾ ಪೂಜಾರಿ, ಸಿಪಿಸಿ ರವಿ ಗಸ್ತಿ, ಸುರೇಶ ನಂದಿವಾಲೆ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Share this with Friends

Related Post