Tue. Aug 4th, 2026

ರಾಜ್ಯದಲ್ಲಿ ಅತಿವೃಷ್ಟಿ-ಬರ ಭೀತಿ: ಸ್ಥಿತಿಗತಿ ಪರಿಶೀಲನೆಗೆ 30 ಸಚಿವರಿಗೆ ಜಿಲ್ಲಾ ಉಸ್ತುವಾರಿ ಹಂಚಿಕೆ ಮಾಡಿದ ಸಿಎಂ ಡಿ.ಕೆ. ಶಿವಕುಮಾರ್

Share this with Friends

ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಕ್ರಮ ಕೈಗೊಂಡಿದ್ದಾರೆ. ಸಚಿವ ಸಂಪುಟದ ಒಟ್ಟು 30 ಸಹೋದ್ಯೋಗಿಗಳಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ವಿವಿಧ ಜಿಲ್ಲೆಗಳ ಉಸ್ತುವಾರಿಯನ್ನು ಹಂಚಿಕೆ ಮಾಡಿ ಅಧಿಕೃತ ಆದೇಶ ಹೊರಡಿಸಿದ್ದಾರೆ.

ತಾಲೂಕು ಮಟ್ಟದ ಪರಿಶೀಲನೆಗೆ ಕಟ್ಟುನಿಟ್ಟಿನ ಆದೇಶ

ಮುಖ್ಯಮಂತ್ರಿಗಳು ಹೊರಡಿಸಿರುವ ಆದೇಶದ ಪ್ರಕಾರ, ಜವಾಬ್ದಾರಿ ಪಡೆದ ಸಚಿವರುಗಳು ತಮಗೆ ನಿಯೋಜಿಸಲಾದ ಜಿಲ್ಲೆಗಳಿಗೆ ತಕ್ಷಣವೇ ಪ್ರವಾಸ ಕೈಗೊಳ್ಳಬೇಕಿದೆ. ಕೇವಲ ಜಿಲ್ಲಾ ಕೇಂದ್ರಗಳಷ್ಟೇ ಅಲ್ಲದೆ, ಪ್ರತಿಯೊಂದು ತಾಲೂಕಿನ ತಳಮಟ್ಟದ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸುವಂತೆ ಸೂಚಿಸಲಾಗಿದೆ.

ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ವರದಿ

ಜಿಲ್ಲಾ ಪ್ರವಾಸದ ಬಳಿಕ ಸಚಿವರುಗಳು ಅಲ್ಲಿನ ನೈಜ ಸ್ಥಿತಿಗತಿ ಹಾಗೂ ಸಾರ್ವಜನಿಕರ ಸಮಸ್ಯೆಗಳ ಕುರಿತು ಸಮಗ್ರ ವರದಿಯೊಂದನ್ನು ಸಿದ್ಧಪಡಿಸಬೇಕಿದೆ. ಈ ವಾಸ್ತವ ಸ್ಥಿತಿಯ ವರದಿಯನ್ನು ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಿಗೆ ತಕ್ಷಣವೇ ಸಲ್ಲಿಸುವಂತೆ ಆದೇಶದಲ್ಲಿ ಗಡುವು ವಿಧಿಸಲಾಗಿದೆ.

ಸಚಿವರು ಮತ್ತು ಅವರಿಗೆ ಹಂಚಿಕೆಯಾದ ಜಿಲ್ಲೆಗಳ ಸಂಪೂರ್ಣ ಪಟ್ಟಿ:

1.ಡಾ. ಜಿ. ಪರಮೇಶ್ವರ್-ತುಮಕೂರು

2.ರಘುಮೂರ್ತಿ-ಚಿತ್ರದುರ್ಗ

3.ಬಿ.ಎಸ್. ಸುರೇಶ್ (ಭೈರತಿ)-ಚಿಕ್ಕಬಳ್ಳಾಪುರ

4.ಕೆ.ಹೆಚ್. ಮುನಿಯಪ್ಪ-ಬೆಂಗಳೂರು ಗ್ರಾಮಾಂತರ

5.ರಾಮಲಿಂಗಾರೆಡ್ಡಿ-ಕೋಲಾರ

6.ಹೆಚ್. ಸಿ. ಬಾಲಕೃಷ್ಣ-ಬೆಂಗಳೂರು ದಕ್ಷಿಣ

7.ಬಿ.ಝೆಡ್. ಜಮೀರ್ ಅಹಮದ್ ಖಾನ್-ವಿಜಯನಗರ

8.ಕೆ.ಜೆ. ಜಾರ್ಜ್-ಚಿಕ್ಕಮಗಳೂರು

9.ಕೆ.ಎಂ. ಶಿವಲಿಂಗೇಗೌಡ-ಹಾಸನ

10.ಮಧು ಬಂಗಾರಪ್ಪ-ಶಿವಮೊಗ್ಗ

11.ಎಂ.ಬಿ. ಪಾಟೀಲ್-ವಿಜಯಪುರ

12.ವಿಜಯಾನಂದ ಕಾಶಪ್ಪನವರ-ಬಾಗಲಕೋಟೆ

13.ಬಸವರಾಜ ರಾಯರೆಡ್ಡಿ-ಗದಗ

14.ಎಸ್. ಎಸ್. ಮಲ್ಲಿಕಾರ್ಜುನ-ದಾವಣಗೆರೆ

15.ರುದ್ರಪ್ಪ ಲಮಾಣಿ-ಹಾವೇರಿ

16.ಸತೀಶ್ ಜಾರಕಿಹೊಳಿ-ಬೆಳಗಾವಿ

17.ಸಂತೋಷ್ ಲಾಡ್-ಧಾರವಾಡ

18.ಲಕ್ಷ್ಮಣ ಸವದಿ-ಉತ್ತರಕನ್ನಡ

19.ಪ್ರಿಯಾಂಕ್ ಖರ್ಗೆ-ಕಲಬುರಗಿ

20.ಅಜಯ್ ಧರಂ ಸಿಂಗ್-ರಾಯಚೂರು

21.ಈಶ್ವರ್ ಖಂಡ್ರೆ-ಬೀದರ್

22.ಯು.ಟಿ. ಖಾದರ್-ದಕ್ಷಿಣ ಕನ್ನಡ & ಉಡುಪಿ

23.ಪಿ.ಎಂ. ನರೇಂದ್ರಸ್ವಾಮಿ-ಕೊಡಗು

24.ಯತೀಂದ್ರ ಸಿದ್ದರಾಮಯ್ಯ-ಮೈಸೂರು

25.ಚಲುವರಾಯಸ್ವಾಮಿ-ಮಂಡ್ಯ

26.ಪುಟ್ಟರಂಗಶೆಟ್ಟಿ-ಚಾಮರಾಜನಗರ

27.ಬಿ. ನಾಗೇಂದ್ರ-ಬಳ್ಳಾರಿ

28.ಶರಣ ಪ್ರಕಾಶ್ ಪಾಟೀಲ-ಯಾದಗಿರಿ

29.ಶಿವರಾಜ್ ಸಂಗಪ್ಪ ತಂಗಡಗಿ-ಕೊಪ್ಪಳ

30.ಕೃಷ್ಣ ಬೈರೇಗೌಡ-ಬೆಂಗಳೂರು ನಗರ

ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಜನರಿಗೆ ತಕ್ಷಣ ಸ್ಪಂದಿಸಲು ಮತ್ತು ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸಲು ಸರ್ಕಾರದ ಮಟ್ಟದಲ್ಲಿ ಈ ಹಂಚಿಕೆ ಮಾಡಲಾಗಿದೆ.

 


Share this with Friends

Related Post