Sun. Aug 2nd, 2026

ಕೃಷ್ಣಾ ನದಿ ಸೇತುವೆ ಮುಳಗಡೆ: ಉಗಾರ -ಕುಡಚಿ ಸಂಪರ್ಕ ಕಡಿತ

Share this with Friends

ವರದಿ: ವಿಕಿಲ ಎಸ್ ಹಿರೇಮಠ

ಕಾಗವಾಡ: ಮಹಾರಾಷ್ಟ್ರದಲ್ಲಿ ಭಾರೀ ಮಳೆಯಿಂದಾಗಿ 1 ಲಕ್ಷ ಕ್ಯೂಸೇಕ್ ನೀರು ಬಿಡುಗಡೆಯಾಗಿದಕ್ಕೆ ಕೃಷ್ಣಾ ನದಿ ನೀರಿನ ಮಟ್ಟ ಏರಿಕೆ ಹಿನ್ನಲೆಯಲ್ಲಿ ಜಮಖಂಡಿ ಮಾರ್ಗ ಸಂಪರ್ಕಿಸುವ ಕುಡಚಿ‌- ಉಗಾರ ಸೇತುವೆ ರವಿವಾರ ಸಂಜೆ ಮುಳಗಡೆಯಾಗಿದೆ.

ಸೇತುವೆ ಮುಳಗಡೆ ಹಿನ್ನೆಲೆಯಲ್ಲಿ ಕಾಗವಾಡ ತಾಲೂಕಾಡಳಿತ ಹಾಗೂ ಪೊಲೀಸ್ ಠಾಣೆಯವರು ಬ್ಯಾರಿಕೇಡ್ ಅಳವಡಿಸಿ ಸಂಚಾರ ನಿಷೇಧಿಸಿದ್ದಾರೆ‌.

ಇನ್ನು ಈ ಸೇತುವೆ ಮುಳಗಡೆಯಿಂದ ಪ್ರಯಾಣಿಕರಿಗೆ 60 ರಿಂದ 70 ಕಿಲೋ ಮೀಟರ್ ಸುತ್ತಾಗಿ ಪ್ರಯಾಣಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಸಮಯದಲ್ಲಿ ವಿಶೇಷ ಘಟಕ ಸಿಪಿಸಿ ಸುಭಾಷ ದೇವಋಷಿ, ಸಿಪಿಸಿ ರವಿ ಗಸ್ತಿ, 112 ಸಹಾಯವಾಣಿಯ ಎಪಿಸಿ ಅಪ್ಪು ಬಾಗಲಕೋಟ, ಸಿಪಿಸಿ ವಿಶಾಲ‌ ಧರ್ಮಟ್ಟಿ, ಗ್ರಾಮಲೆಕ್ಕಾಧಿಕಾರಿ ಸುಕುಮಾರ ಕಲಾಜ, ಪುರಸಭೆ ಸಿಬ್ಬಂದಿ ರವಿ ಹಳ್ಳೂರ ಉಪಸ್ಥಿತರಿದ್ದರು.


Share this with Friends

Related Post