Sat. Jun 6th, 2026

ಕೆಎಸ್ಆರ್‌ಟಿಸಿ ಅಂತರ ನಿಗಮ ವರ್ಗಾವಣೆ: ನೌಕರರ ಸಂಭವನೀಯ ಪಟ್ಟಿ ಪ್ರಕಟ

Share this with Friends

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) 2026ನೇ ಸಾಲಿನ ಅಂತರ ನಿಗಮ ವರ್ಗಾವಣೆ ಪ್ರಕ್ರಿಯೆಯು ಮಹತ್ವದ ಹಂತ ತಲುಪಿದ್ದು, ದರ್ಜೆ-3 ಮತ್ತು ದರ್ಜೆ-4ರ ನೌಕರರ ವರ್ಗಾವಣೆಯ ಸಂಭವನೀಯ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ.

ದರ್ಜೆ-3ರ ಮೇಲ್ವಿಚಾರಕೇತರ ಸಿಬ್ಬಂದಿ ಹಾಗೂ ದರ್ಜೆ-4ರ ನೌಕರರಿಗೆ ಸಂಬಂಧಿಸಿದಂತೆ ಪರಸ್ಪರ ವರ್ಗಾವಣೆ ಮತ್ತು ಸಾಮಾನ್ಯ ವರ್ಗಾವಣೆಗಳ (ಪತಿ-ಪತ್ನಿ ಪ್ರಕರಣ, ಶೇ.40ಕ್ಕಿಂತ ಹೆಚ್ಚಿನ ಅಂಗವಿಕಲತೆ ಹಾಗೂ ತೀವ್ರ ಅನಾರೋಗ್ಯದ ಪ್ರಕರಣಗಳು) ಪಟ್ಟಿಯನ್ನು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ksrtc.karnataka.gov.in ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಆಕ್ಷೇಪಣೆ ಸಲ್ಲಿಸಲು ಏಪ್ರಿಲ್ 16 ಕೊನೆಯ ದಿನ:

ಈಗಾಗಲೇ ಪ್ರಕಟಿಸಲಾಗಿರುವ ಸಂಭವನೀಯ ಪಟ್ಟಿಯಲ್ಲಿ ಯಾವುದೇ ವ್ಯತ್ಯಾಸಗಳಿದ್ದಲ್ಲಿ ಅಥವಾ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ನೌಕರರಿಗೆ ಅವಕಾಶ ಕಲ್ಪಿಸಲಾಗಿದೆ. ದಿನಾಂಕ 09.04.2026 ರಿಂದ ಏಪ್ರಿಲ್ 16ರ ಸಂಜೆ 5:30ರವರೆಗೆ ಲಿಖಿತ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.

ಸಲ್ಲಿಕೆ ವಿಧಾನ:

ನೌಕರರು ತಮ್ಮ ಆಕ್ಷೇಪಣೆಗಳನ್ನು ಕಡ್ಡಾಯವಾಗಿ ಆಯಾ ವಿಭಾಗದ ಆಡಳಿತಾಧಿಕಾರಿಗಳಿಗೆ ಸಲ್ಲಿಸಿ ಸ್ವೀಕೃತಿ ಪಡೆಯಬೇಕು. ವೈಯಕ್ತಿಕವಾಗಿ ಅಥವಾ ಅಂಚೆಯ ಮೂಲಕ ಕೇಂದ್ರ ಕಛೇರಿಗೆ ಕಳುಹಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 


Share this with Friends

Related Post