Mon. Jul 27th, 2026

ಪ್ರಯಾಣಿಕರ ಗಮನಕ್ಕೆ: ತಿಪಟೂರು ರೈಲು ನಿಲ್ದಾಣ ಕಾಮಗಾರಿ; ಆಗಸ್ಟ್ 20ರ ವರೆಗೆ ಹಲವು ಪ್ರಮುಖ ರೈಲುಗಳ ಸಂಚಾರ ವಿಳಂಬ

Share this with Friends

ಬೆಂಗಳೂರು: ರೈಲ್ವೆ ಪ್ರಯಾಣಿಕರೇ ಗಮನಿಸಿ, ತಿಪಟೂರು ರೈಲು ನಿಲ್ದಾಣದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಇಂದಿನಿಂದ (ಜುಲೈ 27) ಆಗಸ್ಟ್ 20ರ ವರೆಗೆ ಈ ಮಾರ್ಗದಲ್ಲಿ ಚಲಿಸುವ ಹಲವು ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ಮಾರ್ಗಮಧ್ಯೆ ನಿಯಂತ್ರಿಸಲು (ವಿಳಂಬ) ನೈಋತ್ಯ ರೈಲ್ವೆ ನಿರ್ಧರಿಸಿದೆ.

ಯಾವ ರೈಲುಗಳು ಎಷ್ಟು ನಿಮಿಷ ತಡವಾಗಿ ಓಡಲಿವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ:

ಪ್ರತಿದಿನ ಸಂಚರಿಸುವ ರೈಲುಗಳ ವಿವರ (ಜುಲೈ 27 ರಿಂದ ಆಗಸ್ಟ್ 20ರ ವರೆಗೆ):

ಬೆಂಗಳೂರು-ಹುಬ್ಬಳ್ಳಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20688): ಕೆಎಸ್ಆರ್ ಬೆಂಗಳೂರಿನಿಂದ ಹೊರಡುವ ಈ ರೈಲನ್ನು ಮಾರ್ಗಮಧ್ಯೆ 15 ನಿಮಿಷ ನಿಯಂತ್ರಿಸಲಾಗುತ್ತದೆ.

ಯಶವಂತಪುರ–ಸಿಂಧನೂರು ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16545): ಯಶವಂತಪುರದಿಂದ ಹೊರಡುವ ಈ ರೈಲು ಮಾರ್ಗಮಧ್ಯೆ 90 ನಿಮಿಷಗಳ ಕಾಲ (ಒಂದೂವರೆ ಗಂಟೆ) ವಿಳಂಬವಾಗಲಿದೆ.

ಬೆಂಗಳೂರು–ಬೆಳಗಾವಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20653): ಕೆಎಸ್ಆರ್ ಬೆಂಗಳೂರಿನಿಂದ ಹೊರಡುವ ಈ ರೈಲನ್ನು ಮಾರ್ಗಮಧ್ಯೆ 50 ನಿಮಿಷ ನಿಲ್ಲಿಸಲಾಗುತ್ತದೆ.

ಯಶವಂತಪುರ–ವಿಜಯಪುರ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16547): ಯಶವಂತಪುರದಿಂದ ಹೊರಡುವ ಈ ರೈಲು ಮಾರ್ಗಮಧ್ಯೆ 45 ನಿಮಿಷ ತಡವಾಗಿ ಸಂಚರಿಸಲಿದೆ.

ವಾರದ ನಿರ್ದಿಷ್ಟ ದಿನಗಳಲ್ಲಿ ಓಡುವ ರೈಲುಗಳ ವಿಳಂಬದ ವಿವರ:

ಬೆಂಗಳೂರು–ಲೋಕಮಾನ್ಯ ತಿಲಕ್ ಟರ್ಮಿನಸ್ (16553): ಜುಲೈ 28, ಆಗಸ್ಟ್ 1, 4, 8, 11, 15 ಮತ್ತು 18 ರಂದು ಎಸ್‌ಎಮ್‌ವಿಟಿ ಬೆಂಗಳೂರಿನಿಂದ ಹೊರಡುವ ಈ ರೈಲು 45 ನಿಮಿಷ ತಡವಾಗಲಿದೆ.

ಶಿರಡಿ–ಮೈಸೂರು ಎಕ್ಸ್‌ಪ್ರೆಸ್ (16218): ಜುಲೈ 29, ಆಗಸ್ಟ್ 5, 12 ಮತ್ತು 19 ರಂದು ಸಾಯಿನಗರ ಶಿರಡಿಯಿಂದ ಹೊರಡುವ ಈ ರೈಲು ಮಾರ್ಗಮಧ್ಯೆ 110 ನಿಮಿಷ (ಪ್ರಾಯೋಗಿಕವಾಗಿ 2 ಗಂಟೆಯಷ್ಟು) ತಡವಾಗಲಿದೆ.

ಚೆನ್ನೈ ಸೆಂಟ್ರಲ್–ಹುಬ್ಬಳ್ಳಿ ಎಕ್ಸ್‌ಪ್ರೆಸ್ (20679): ಜುಲೈ 31, ಆಗಸ್ಟ್ 7 ಮತ್ತು 14 ರಂದು ಚೆನ್ನೈನಿಂದ ಹೊರಡುವ ರೈಲು 30 ನಿಮಿಷ ವಿಳಂಬವಾಗಲಿದೆ.

ಚೆನ್ನೈ ಸೆಂಟ್ರಲ್–ಹುಬ್ಬಳ್ಳಿ ಎಕ್ಸ್‌ಪ್ರೆಸ್ (22698): ಆಗಸ್ಟ್ 2, 9 ಮತ್ತು 16 ರಂದು ಚೆನ್ನೈನಿಂದ ಹೊರಡುವ ರೈಲನ್ನು ಮಾರ್ಗಮಧ್ಯೆ 30 ನಿಮಿಷ ನಿಯಂತ್ರಿಸಲಾಗುತ್ತದೆ.

ಹೀಗಾಗಿ ಪ್ರಯಾಣಿಕರು ತಮ್ಮ ಪ್ರಯಾಣದ ಸಮಯವನ್ನು ಈ ಬದಲಾವಣೆಗಳಿಗೆ ಅನುಗುಣವಾಗಿ ಯೋಜಿಸಿಕೊಳ್ಳುವಂತೆ ರೈಲ್ವೆ ಇಲಾಖೆ ಕೋರಿದೆ.

 

 


Share this with Friends

Related Post